Library-logo-blue-outline.png
View-refresh.svg
Transclusion_Status_Detection_Tool

ನಡೆಯದ ನುಡಿಗಡಣ, ಮಾಡದ

ವಿಕಿಸೋರ್ಸ್ ಇಂದ
Jump to navigation Jump to search


Pages   (key to Page Status)   

ನಡೆಯದ ನುಡಿಗಡಣ
ಮಾಡದ ಕಲಿತನ
ಚಿತ್ರದಸತಿಯ ಶೃಂಗಾರವದೇತಕ್ಕೆ ಪ್ರಯೋಜನ ? ಎಲೆಯಿಲ್ಲದ ಮರನು
ಜಲವಿಲ್ಲದ ನದಿಯು
ಗುಣಿಯಲ್ಲದ ಅವಗುಣಿಯ ಸಂಗವದೇತಕ್ಕೆ ಪ್ರಯೋಜನ ? ದಯವಿಲ್ಲದ ಧರ್ಮ
ಉಭಯವಿಲ್ಲದ ಭಕ್ತಿಯು
ನಯವಿಲ್ಲದ ಶಬ್ದವದೇತಕ್ಕೆ ಪ್ರಯೋಜನ ಎನ್ನ ದೇವ ಚೆನ್ನಮಲ್ಲಿಕಾರ್ಜುನಾ ?