ನಡೆ ನುಡಿಯಿಲ್ಲದ ಗುರುವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಡೆ ನುಡಿಯಿಲ್ಲದ ಗುರುವ ಕಂಡು ಉಪದೇಶವ ಪಡೆಯಲೆಂದು ಹೋದಡೆ; ಒಡನೆ ನುಡಿಯನು ನುಡಿಸಿದಡೆ ಕೇಳನು. ಕಡೆ ಮೊದಲ ಕಾರ್ಯ ಎಂತಪ್ಪುದೊ ಅಯ್ಯಾ ? ಮೂಗರ ಮೂಗರ ಪ್ರಸಂಗದಂತೆ ಇದೆ ಎನ್ನೊಳಗೆ ಅರಿವಿನ ಪರಿಮಳ ! ಹೊರಗೆ ನೋಡಿದಡೆ ಮುಗ್ಧವಾಯಿತ್ತು. ಇದನೆಂತು ಉಪಮಿಸುವೆ ಅನಿಯಮದ ಬೆಡಗ ? ಇದು ತನ್ನಿಂದ ತಾನಪ್ಪುದಲ್ಲದೆ
ಭಿನ್ನದಲುಂಟೆ ಗುಹೇಶ್ವರಾ ?