ವಿಷಯಕ್ಕೆ ಹೋಗು

ನದಿ ಕೂಪ ತಟಾಕ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ನದಿ ಕೂಪ ತಟಾಕ ಜಲಾಶಯದಲ್ಲಿ ಅಗ್ಗಣಿಯ ತಂದು ಮಜ್ಜನಕ್ಕೆ ನೀಡುವರೆಲ್ಲ ಶೀಲವಂತರೆ ? ಪಾಕದಲ್ಲಿ ಪರಪಾಕ ಭವಿಪಾಕ ಎಂಬವರೆಲ್ಲ ಶೀಲವಂತರೆ ? ತಳಿಗೆ ಬಟ್ಟಲ ಪ್ರಗಾಳಿಸಿ ನೇಮವ ಮಾಡಿಕೊಂಬವರೆಲ್ಲ ಶೀಲವಂತರೆ ? ಕಂಠಪಾವಡ
ಧೂಳಿಪಾವಡ
ಸರ್ವಾಂಗಪಾವಡವೆಂಬವರೆಲ್ಲ ಶೀಲವಂತರೆ ? [ಲ್ಲ]
ಅದೇನು ಕಾರಣವೆಂದಡೆ; ಅವರು `ಸಂಕಲ್ಪಂ ಚ ವಿಕಲ್ಪಂ ಚ ಆ ಎಂದುದಾಗಿ
ಶುದ್ಧಭವಿಗಳು. ಭವಿಯೆಂಬವನೆ ಶ್ವಪಚ
ವ್ರತಸ್ಥನೆಂಬವನೆ ಸಮ್ಮಗಾರ. ಶೀಲವಿನ್ನಾವುದೆಂದಡೆ; ಆಶನ ಅರತು
ವ್ಯಸನ ನಿಂದು
ವ್ಯಾಪ್ತಿಯಳಿದು
ಅಷ್ಟಮದವೆಲ್ಲ ನಷ್ಟವಾದಲ್ಲದೆ
ಕೂಡಲಚೆನ್ನಸಂಗಮದೇವರಲ್ಲಿ ಶೀಲವಿಲ್ಲ ಕಾಣಿರೊ