ನದಿ ನದಿಯ ಕೂಡಿದಂತೆ ಬಯಲು ಬಯಲ ಬೆರೆದಂತೆ ಮಾತು ಮಾತ ಕಲೆತಂತೆ ಜ್ಯೋತಿ ಜ್ಯೋತಿ ಒಂದಾದಂತೆ ಅಖಂಡೇಶ್ವರಾ ನಿಮ್ಮೊಳೊಡವೆರೆದ ನಿಜೈಕ್ಯನ ಕುರುಹು ಇಂತುಟಯ್ಯಾ.