ನಮ್ಮೂರ ಮಂದಾರ ಹೂವೆ - ಒಂಕಾರದೀ

ವಿಕಿಸೋರ್ಸ್ ಇಂದ
Jump to navigation Jump to search

ಚಿತ್ರ: ನಮ್ಮೂರ ಮಂದಾರ ಹೂವೆ
ಗಾಯನ: ಕೆ ಎಸ್ ಚಿತ್ರಾ,
ಸಂಗೀತ: ಇಳಯರಾಜ


ಓಂಕಾರದಿ ಕಂಡೆ ಪ್ರೇಮ ನಾದವ ಈ ತಾಣದಿ ತಂದೆ ನೀ ಶುಭೋದಯ ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ ಸೌಗಂಧಹಾಸ ಚೆಲ್ಲಿ ನಿನ್ನ ಕಾದಿದೆ ಅರಿಯೋ ಇನಿಯ ಒಲವ ಕರೆಯ.....

ಮಧುರ ತಾನ ಸ್ವರಗಳ ಸೇರಿ......ಒಹೊಹೊಹೊಹೋ ಓಹೊಹೊಹೋಹೋ ಜಲಲ ಧಾರೆ ಜಲದಲಿ ಜಾರಿ......ಓಹೊಹೊಹೋಹೋ ಒಹೊಹೊಹೊಹೋ

ಆಕಾಶದಾಚೆ ಆ ಮೌನದಿ ಆ ತಾರೆಯೇಕೆ ತಾನ್ ತೇಲಿವೆ ಬಂದಾಗ ಅರಿವು ಇಲ್ಲಿ ತಂದಿತು ಒಲವು ಅಲ್ಲಿ ಅರಿಯೋ ಇನಿಯ ಒಲವ ನಿಧಿಯ......

ಓಂಕಾರದಿ...

ನಿನದೆ ಗಾನ ಹೃದಯದಿ ತೇಲಿ.....ಒಹೊಹೊಹೊಹೋ ಓಹೊಹೊಹೋಹೋ ಲಯದಿ ರಾಗ ಅಲೆಗಳ ಬೀರಿ......ಒಹೊಹೊಹೊಹೋ ಓಹೊಹೊಹೋಹೋ

ಈ ಗೀತೆಗಾದೆ ನೀ ಭಾವನ ಈ ಬಾಳಿಗಾದೆ ನೀ ಚೇತನ ಸಂಗೀತ ಸುಧೆಯ ತುಂಬಿ ಮಾಧುರ್ಯ ಮನದಿ ತಂದೆ ಅರಿಯೋ ಇನಿಯ ಒಲವ ಸವಿಯ.....

ಓಂಕಾರದಿ....