ನಮ್ಮ ಜೀವನ ನಮ್ಮ ಕೈಯಲ್ಲಿ

ವಿಕಿಸೋರ್ಸ್ದಿಂದ
                                                        ನಮ್ಮ ಜೀವನ ನಮ್ಮ ಕೈಯಲ್ಲಿ

ನಮಗೆ ಪ್ರಿಯವಾದವರು ಯಾರು ಎಂದು ಕೇಳಿದರೆ, ಯಾವ ಸಾಲಿನಲ್ಲಿ ನಮ್ಮ ಸ್ವಂತ ಹೆಸರನ್ನು ಹೇಳುತ್ತೇವೆ? ನಮ್ಮನ್ನು ನಾವು ಅರಿಯದಿದ್ದರೆ, ಬೇರೆಯವರು ನಮ್ಮನ್ನು ಹೇಗೆ ಅರಿಯಬಲ್ಲರು? ನಮ್ಮ ಮೇಲಿರುವ ಅಸಮಾಧಾನದಿಂದ ನಮಗೆ ಚಿಕ್ಕ ಚಿಕ್ಕ ವಿಶಯಗಳೂ ಕಷ್ಟಕರವಾಗಿಯೇ ಕಾಣುತ್ತದೆ. ನಮಗೆ ಬೇರೆ ಅವರ ಆಸರೆ ಹಾಗು ಪ್ರೀತಿಯ ಅವಸರ ಹುಟ್ಟಿಕೋಳ್ಳುತ್ತದೆ. ಎಲ್ಲಿ ಹೋದರು, ಹೇಗೆ ಇದ್ದರು ನಮಗೆ "ನಾನು ಸರಿಯಾಗಿ ಇಲ್ಲವೇನೋ, ಅವರಿಗೆ ನನ್ನ ಮೇಲೆ ಏನು ಅಭಿಪ್ರಾಯ ಇದೆಯೋ?" ಇಂತಹ ಹಲವಾರು ಚಿಂತೆಗಳು ತಲೆಯಲ್ಲಿ ಆಡುತ್ತಿರುತ್ತದೆ. ನಮ್ಮ ಮೇಲೆ ಅಸಮಾಧಾನ ಹುಟ್ಟಿಕೊಳ್ಳಲು ತಳಪಾಯವಾಗಿರುವುವು ರೂಪ, ದೇಹದ ಸೌಂದರ್ಯ, ದೇಹದ ಬಣ್ಣ, ನಮ್ಮನ್ನು ನಾವು ಹಾಗು ಇತರರನ್ನು ತಿಳಿಯಲು ಪ್ರಯತ್ನಿಸದಿರುವುದು, ಹಾಗೂ ಯಾವುದೇ ತರಹದ ಹಿಂಜರಿಕೆಯ ಸ್ವಭಾವ . ಇವುಗಳಿಂದ ನಮ್ಮ ಮನದಲ್ಲಿ ಒಂದು ರೀತಿಯ ಕೀಳರಿಮೆ ಹುಟ್ಟಿಕೊಳ್ಳುತ್ತದೆ. ಇದರಿಂದ ನಾವು ಬೇರೆಯವರ ಆಸರೆಗಾಗಿ ಹುಡುಕಾಡುತ್ತೇವೆ. ಆ ಆಸರೆ ದೊರೆಯದಿದ್ದರೆ ನಮ್ಮನ್ನು ನಾವು ದೋಶಿಸಿಕೊಳ್ಳುವುದು ಪ್ರಾರಂಬಿಸುತ್ತೇವೆ ಹಾಗು ಖಿನ್ನತೆಗೆ ಒಳಗಾಗುತ್ತೇವೆ. ಮೊದಲಾಗಿ ಇದು ನಮ್ಮ ಜೀವನ. ನಮ್ಮ ಜೀವನವನ್ನು ನಿಯಂತ್ರಣವಾಗಿ ನೋಡಿಕೊಳ್ಳಲು ನಮಗೆ ಮಾತ್ರ ಸಾಧ್ಯವಾಗುತ್ತದೆ. ರೂಪವು ಹೀಗಿದ್ದರೆ ಸುಂದರ ಹಾಗಿದ್ದರೆ ಕೊಳಕು ಎಂದು ಯಾರು ನಿರ್ಮಿಸಿದರು? ರೂಪವು ಆಕರ್ಷಕವಾಗಿದ್ದು, ಮನಸ್ಸು ಸರಿಯಾಗಿಲ್ಲದಿದ್ದರೆ ಎಲ್ಲರಿಗೂ ಅವರು ಕೊಳಕಾಗಿಯೇ ಕಾಣುತ್ತಾರೆ. ಹಾಗೆಯೇ ನೋಡಲು ಆಕರ್ಷಿಕವಾಗಿ ಇಲ್ಲದಿದ್ದರೂ ಅವರ ಮನಸ್ಸು ಸ್ವಚ್ಚವಾಗಿದ್ದರೆ, ಅವರು ಮುದ್ದಾಗಿಯೇ ಕಾಣುತ್ತಾರೆ. ಆದುದರಿಂದಲೇ ಸಿನಿಮಾ ನಟರಾದ ರಜನೀಕಾಂತ್‍ನವರು ಲಕ್ಶಾಂತರ ಮನಗಳನ್ನು ಗೆದ್ದಿದ್ದಾರೆ. ಅವರನ್ನು ಅವರು ನಂಬಿದರು. ಅವರು ಯಾರ ಸಹಾಯಕ್ಕೂ ಕಾಯದೆ ಸ್ವಂತ ಪ್ರಯತ್ನವನ್ನು ಮಾಡಿದರು. ಆದುದರಿಂದಲೇ ಅವರು ಈ ದಿನ ಇಂತಹ ಹಂತವನ್ನು ತಲುಪಿದ್ದಾರೆ. ನಮ್ಮನ್ನು ನಾವು ಪ್ರೀತಿಸಿದರೆ ನಮಗೆ ರೂಪದ ಚಿಂತೆಯಾಗಲಿ ಆಸರೆಯ ಅವಸರವಾಗಲಿ ಇರುವುದಿಲ್ಲ. ಜೀವನವು ಸುಂದರವಾಗಿ ಕಾಣುತ್ತದೆ. ನಮ್ಮೊಂದಿಗೆ ನಾವೊಬ್ಬರೆ ಜೀವನಪರ್ಯಂತ ಇರುವುದು, ಆದುದರಿಂದ ನಮ್ಮನ್ನು ನಾವು ಸ್ವೀಕರಿಸಿಕೊಳ್ಳಬೇಕು. ನಮ್ಮನ್ನು ನಾವು ಅರಿತು ಪ್ರೀತಿಸಿದರೆ, ಸ್ವಯಂಚಾಲಿತವಾಗಿ ನಮ್ಮಲ್ಲಿ ನಮಗೆ ನಂಬಿಕೆ, ಧೈರ್ಯ ದೃಡಗೊಳ್ಳುತ್ತದೆ. ಇದೆಲ್ಲ ಸೈದ್ಧಾಂತಿಕವಾಗಿ ಮಾತ್ರ ಜಾರಿಯಾಗುತ್ತೆ ಎಂದು ತಿಳಿಯಬೇಡಿ. ಇದು ಪ್ರಯೋಗಿಕವಾಗಿಯೂ ಯಶಸ್ವಿಯಾಗಿದೆ. ಇದಕ್ಕೆ ನನ್ನ ಶಾಲೆಯಲ್ಲಿದ್ದ ಸ್ನೆಹಿತರಾದ ರೀತ ಹಾಗು ಪ್ರೀತಿಯೇ ಸಾಕ್ಶಿ. ಅವರಿಬ್ಬರು ಅವಳಿ ಜವಳಿ. ಶಾಲೆಯಲ್ಲಿ ಓದುತ್ತಿರುವಾಗ ಇಬ್ಬರು ನೋಡಲು ಒಂದೇ ತರೆಹ ಕಾಣುತ್ತಿದ್ದರು. ಅವರಿಬ್ಬರು ದಪ್ಪವಾಗಿದ್ದರು ಹಾಗು ಕಪ್ಪು ಬಣ್ಣದವರಾಗಿದ್ದರು. ಆದರು ರೀತ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಯಾವಾಗಲೂ ಖುಷಿ ಖುಷಿಯಾಗೆ ಇರುತ್ತಿದ್ದಳು. ಯಾವ ಚಿಂತೆ ಬಂದರು ಅದನ್ನು ತಾಳ್ಮೆ ಇಂದ ಪರಿಹಾರ ಮಾಡಿಕೊಳ್ಳುತ್ತಿದ್ದಳು. ಅದಲ್ಲದೆ ಅವಳು ಅವಳೊಬ್ಬಳ ಜೊತೆ ಮಾತ್ರ ಇರಲು ಇಚ್ಚಿಸುತ್ತಿದ್ದಳು. ಅದರ ಅರ್ಥ, ಅವಳು ಅವಳನ್ನು ಮೊದಲು ಪ್ರೀತಿಸುತ್ತಳೆಂದು. ಆದರೆ, ಪ್ರೀತಿ ಮಾತ್ರ ಅವಳನ್ನು ಅವಳು ತುಂಬ ಅಸಮಾಧಾನದಿಂದ ನೋಡುತ್ತಿದ್ದಳು. ಸ್ನೇಹಿತರಿಗೆ ತುಂಬ ಪ್ರಾಮುಖ್ಯತೆ ಕೊಡುತ್ತಿದ್ದಳು. ಜನರೊಂದಿಗೆ ಮಾತನಾಡಲು ಭಯಬೀತಳಾಗುತ್ತಿದ್ದಳು. ಹೀಗೆ ದೇಹ ಹಾಗು ರೂಪ ಒಂದೆ ಆದರು ಇಬ್ಬರಲ್ಲೂ ವಿವಿಧ ಮನಸ್ತಿತಿಗಳು ಎದ್ದವು. ಇದರಿಂದ ನಾವು ಕಲಿಯುವುದೇನೆಂದರೆ, ನಾವು ಹೇಗಿದ್ದರು ನಮ್ಮನ್ನು ನಾವು ರೂಪಿಸಿಕೊಳ್ಳುವುದರ ಮೇಲೆ ಆಧಾರವಾಗುತ್ತದೆ. ಕೊನೆಯದಾಗಿ ನಾನು ದ್ರುಡೀಕರಿಸಲು ಇಚ್ಚಿಸುವುದೇನೆಂದರೆ, ನಮಗೆ ಇರುವುದು ಒಂದೇ ಜೀವನ. ನಮಗೆ ಸಿಕ್ಕಿರುವುದನ್ನು ಸಂತೋಶವಾಗಿ ಸ್ವೀಕರಿಸಿ, ಎಲ್ಲವನ್ನು ನಮಗೆ ಅನುಗುಣವಾಗಿ ನಾವೇ ರೂಪಿಸಿಕೊಳ್ಳಬೇಕು. ಇದಕ್ಕೆಲ್ಲಾ ಇರುವುವ ಮೊದಲ ಮಾರ್ಗ, ನಮ್ಮನ್ನು ನಾವು ಅರಿತು, ಜೀವನದಲ್ಲಿ ನಡೆಯುವ ಪ್ರತೀ ವಿಶಯವನ್ನು ಧನಾತ್ಮಕವಾಗಿಯೇ ಸ್ವೀಕರಿಸುವುದು.

                                                                                                                                   - ರಮಿತ.ಕೆ.ಆರ್