ನರರಂತೆ ನಡೆವುತ್ತಿಪ್ಪರಯ್ಯ, ನರರಂತೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನರರಂತೆ ನಡೆವುತ್ತಿಪ್ಪರಯ್ಯ
ನರರಂತೆ ನುಡಿವುತ್ತಿಪ್ಪಿರಿ ಅಯ್ಯ. ನರರಂತೆ ಉಣ್ಣುತ್ತಿಪ್ಪಿರಯ್ಯ
ನರರಂತೆ ಉಡುತಿಪ್ಪಿರಿ ಅಯ್ಯ. ನೋಡಿದರೆ ಅವರವರಂತಿಪ್ಪಿರಿ
ವಿವರಿಸಿದರೆ ನೀವು ನಿಮ್ಮಂತೆ ಇಪ್ಪಿರಿ ಅಯ್ಯ. ಹತ್ತರೊಳಗೆ ಹನ್ನೊಂದಾಗಿಪ್ಪಿರಿ ಅಯ್ಯ. ಕುರುಹಿನ ನಾಮವಿಡಿದು ಕರೆದರೆ `ಓ' ಎಂದೆಂಬಿರಿ. ನಾಮವಿಲ್ಲದ ಸೀಮೆಯಿಲ್ಲದ ನಿಸ್ಸೀಮ ಲಿಂಗೈಕ್ಯನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.