ನಲ್ಲನ ಜಾಗ್ರಾವಸ್ಥೆಯಲ್ಲಿ ಕಾಣದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಲ್ಲನ
ಕಾಣದೆ
ತಲ್ಲಣಗೊಳತಿರ್ಪುದು
ನೋಡಾ
ಎನ್ನ
ಮನವು.
ಜಾಗ್ರಾವಸ್ಥೆಯಲ್ಲಿ
ನಲ್ಲನ
ಚಿಂತೆಯಿಂದ
ಸುಳಿವುತಿರ್ದೆನವ್ವಾ.
ಸ್ವಪ್ನಾವಸ್ಥೆಯಲ್ಲಿ
ನಲ್ಲನ
ಚಿಂತೆಯಿಂದೆ
ಕಳವಳಿಸುತಿರ್ದೆನವ್ವಾ.
ಸುಷುಪ್ತಾವಸ್ಥೆಯಲ್ಲಿ
ನಲ್ಲನ
ಚಿಂತೆಯಿಂದೆ
ಮೈಮರೆದಿರ್ದೆನವ್ವಾ.
ಸರ್ವಾವಸ್ಥೆಯಲ್ಲಿ
ಅಖಂಡೇಶ್ವರನೆಂಬ
ನಲ್ಲನ
ಕೂಡಬೇಕೆಂಬ
ಭ್ರಾಂತಿಯಿಂದೆ
ಬಡವಾಗುತಿರ್ದೆನವ್ವಾ.