ನವಖಂಡ ಪೃಥ್ವಿ ಚತುರ್ದಶಭುವನದೊಳಗೆ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ನವಖಂಡ ಪೃಥ್ವಿ ಚತುರ್ದಶಭುವನದೊಳಗೆ ಸ್ಥೂಲವಾವುದು
ಸೂಕ್ಷ್ಮವಾವುದು ಬಲ್ಲವರು ನೀವು ಹೇಳಿರಿ ! ಕಾಲಚಕ್ರವೊ
ಕರ್ಮಚಕ್ರವೊ
ನಾದಚಕ್ರವೊ
ಬಿಂದುಚಕ್ರವೊ. ಇದರೊಳಗೆ ಆವುದ ಹಿರಿದೆಂಬೆನಾವುದ ಕಿರಿದೆಂಬೆ ? ಬಲ್ಲವರು ನೀವು ಹೇಳಿರೆ !ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವೆಂಬಡೆ ಇಕ್ಕಿದ ರಾಟಳ ತುಂಬುತ ಕೆಡಹುತಲಿದ್ದೂದಾಗಿ. ಕೀಲು ಮುರಿದು
ರಾಟಳ ನಿಂದು
ನಿಶ್ಶೂನ್ಯವಾಗಿ ಕೂಡಲಚೆನ್ನಸಂಗನಲ್ಲಿ ಮಹಾಪ್ರಸಾದಿ.