ನವಖಂಡ
ಮಂಡಲದೊಳಗೊಂದು
ಪುಂಡರೀಕವೆಂಬ
ಹುತ್ತವಿರ್ಪುದು.
ಆ
ಹುತ್ತದೊಳಗೊಂದು
ವಿಚಿತ್ರ
ಸರ್ಪವಿರ್ಪುದು.
ಆ
ಸರ್ಪನ
ಬಾಯೊಳಗೊಂದು
ಬೆಲೆಯಿಲ್ಲದ
ರತ್ನವಿರ್ಪುದು.
ಈ
ರತ್ನದ
ಬೆಳಗಿನೊಳಗೆ
ಈರೇಳುಲೋಕದ
ಸುಳುಹಿರ್ಪುದನಾರೂ
ಅರಿಯರಲ್ಲ
!
ಆ
ಹತ್ತುವ
ಕೆಡಿಸದೆ
ಸರ್ಪನ
ಕೊಂದು
ರತ್ನವ
ಸಾಧ್ಯಮಾಡಿಕೊಂಡಾತನೆ
ಮುಕ್ತಿರಾಜ್ಯಕ್ಕೆ
ಅರಸನಪ್ಪನಯ್ಯಾ
ಅಖಂಡೇಶ್ವರಾ.