ವಿಷಯಕ್ಕೆ ಹೋಗು

ನವಿರೂ ನೆಳಲೂ ಇಲ್ಲದಂದು,

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ನವಿರೂ ನೆಳಲೂ ಇಲ್ಲದಂದು
ಷಡುಶೈವರಿಲ್ಲದಂದು ಬ್ರಹ್ಮಾಂಡ ಭಾಂಡ ಭಾಂಡಾವಳಿಗಳಿಲ್ಲದಂದು ಪಿಂಡಾಂಡ ಅಂಡ ಪಿಂಡಾವಳಿಗಳಿಲ್ಲದಂದು ಅಖಂಡಿತ ಜ್ಯೋತಿರ್ಮಯಲಿಂಗ ! ಶರಣನ ಲೀಲೆಯಿಂದಾದ ಏಳು ತೆರದ ಗಣ[ಘನ] ಪಿಂಡವಂ ಕಂಡು ಅಖಂಡಿತನಾಗಿ ಬದುಕಿದೆನಯ್ಯಾ ಗುಹೇಶ್ವರಾ.