ನಾದ ನಿಜವೆಂಬೆನೆ ನಿಜವೆಂಬೆನೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಾದ ನಿಜವೆಂಬೆನೆ ? ನಾದ ನಿಜವಲ್ಲ. ಬಿಂದು ನಿಜವೆಂಬೆನೆ ? ಬಿಂದು ನಿಜವಲ್ಲ. ಕಳೆ ನಿಜವೆಂಬೆನೆ ? ಕಳೆ ನಿಜವಲ್ಲ. ಆ ನಾದ ಬಿಂದು ಕಳೆಗಳಿಂದೊಗೆದ ಜಗವು ನಿಜವೆಂಬೆನೆ ? ಜಗವು ನಿಜವಲ್ಲ. ಆ ಜಗದ ಮಧ್ಯದಿ ತೋರುವ ಲೀಲೆ ನಿಜವೆಂಬೆನೆ ? ಲೀಲೆ ನಿಜವಲ್ಲ. ಇನ್ನಾವುದು ನಿಜವೆಂದೊಡೆ : ಅಲ್ಲ-ಅಹುದು
ಇಲ್ಲ-ಉಂಟು
ಬೇಕು-ಬೇಡ ಎಂಬ ಭಾವಕ್ಕೆ ಇಂಬಿಲ್ಲದೆ ತಾನಿದಿರೆಂಬ ಶಂಕೆದೋರದೆ
ಅಖಂಡ ಪರಿಪೂರ್ಣವಾದ ಮಹಾಘನವೆ ನಿಮ್ಮ ನಿಜದ ನಿಲವಯ್ಯಾ ಅಖಂಡೇಶ್ವರಾ.