ನಾನಾ ವಿಲಾಸದ ಜಪವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಾನಾ ವಿಲಾಸದ ಜಪವ ಬಿಟ್ಟು ತಪಸಿಯಾಗಿ
ಕರಿಯ [ಕ]ತ್ತರಿಸಿ
ಕರಣನಾಳದ ಗಂಟಲ ಮುಳ್ಳ ಕಿತ್ತು ಗಡ್ಡ
ಮಂಡೆಯ ಕೇಶವ ಸವರಿ ಜ್ಞಾನವೆಂಬ ದಂಡವಂ ಪಿಡಿದು ವೇಳರಿಸಿ ಕರಪಾತ್ರತಿವಿತ[ದಿಂ] ಮೂವರು ಜ್ವಾಲೆಯವರ ಜಾಡಿಸಿ ಜೋಡಿ ಜವಳಿ ಪರನಾದನಾಗಿ ಲೀಲಾಂಗನ ವಿಲಾಸದವರಂತೆ ಹಾದುಣ್ಣದೆ ಒದ್ದು ? ಲಿಂಗಾಂಗಿಗಳಲ್ಲಿ ಕ್ಷುಧಾತೃಷ್ಣೆಯರತು
ಮೂಸಿದ ಮಸಿಯಳಿದು ವಿಚಾರ ಅವಿಚಾರಿ ಅನಾಚಾರಸಂಹಾರಿ ಲಿಂಗಾಲಿಂಗಾಂಗಿ ಲಿಂಗಾರ್ಪಿತ ಶಬ್ದ ಅಕ್ಷಯನ ನಿರೀಕ್ಷಿಸುತ್ತ ಕುಕ್ಷಿಯ ಕುಕ್ಕಿರದೆ ಹೇಮಲೋಲಚಾಲನು
ತುತ್ತಿಂಗೆ ಕೂಳನಾಯ್ವ ಲಾಳಭಂಜಕರನೊಲ್ಲೆನೆಂದ ಕೂಡಲ[ಚೆನ್ನಸಂಗ]ಯ್ಯನು