ನಾನು ಗುರುಲಿಂಗಜಂಗಮದಲ್ಲಿ ನಿಷೆ*ವಿಡಿದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಾನು ಗುರುಲಿಂಗಜಂಗಮದಲ್ಲಿ ನಿಷೆ*ವಿಡಿದು ಬೇಡಿಕೊಂಡು ಬದುಕಿದೆನಯ್ಯಾ. ನಾನು ಪಾದೋದಕ ಪ್ರಸಾದದಲ್ಲಿ ನಿಷೆ*ವಿಡಿದು ಬೇಡಿಕೊಂಡು ಬದುಕಿದೆನಯ್ಯಾ. ನಾನು ಮೂರು ಪ್ರಣವಗಳಲ್ಲಿ ನಿಷೆ*ವಿಡಿದು ಬೇಡಿಕೊಂಡು ಬದುಕಿದೆನಯ್ಯಾ. ನಾನು ಪುರಾತನರ ಮೇಲುಪಂಕ್ತಿಗಳಲ್ಲಿ ನಿಷೆ*ವಿಡಿದು ಬೇಡಿಕೊಂಡು ಬದುಕಿದೆನಯ್ಯಾ. ನಾನು ಶರಣರುಗಳಲ್ಲಿ ನಿಷೆ*ವಿಡಿದು
ಬೇಡಿ ಹಾಡಿ ಹೊಗಳಿ ಐದು ಬಗೆಯ ಜಪವ ಜಪಿಸಿ ಬೇಡಿಕೊಂಡು ಬದುಕಿದೆನಯ್ಯಾ. ಗುಹೇಶ್ವರಾ ನಿಮ್ಮ ಶರಣ ಬಸವಣ್ಣನ ಸನ್ನಿಧಿಯಿಂದ ನಾನು ಕೃತಾರ್ಥನಾದೆನಯ್ಯಾ.