ನಾನು ನೀನೆಂಬ ಮೋಹವೆಲ್ಲಿಯದೊ ? ನಿರ್ಭಾವವೆಂಬ ಪ್ರಸಂಗವೆಲ್ಲಿಯದು ಹೇಳಾ ? ಮನಲೀಯ ಉಭಯಭಾವರಹಿತ ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು.