ನಾರು ಬೇರಿನ ಕುಟಿಲ ಕಪಟದ ಯೋಗವಲ್ಲಿದು ನಿಲ್ಲಿ ಭೋ. ಕಾಯಸಮಾಧಿ ಕರಣಸಮಾಧಿ_ ಯೋಗವಲ್ಲಿದು ನಿಲ್ಲಿ ಭೋ. ಜೀವಸಮಾಧಿಯೆಂಬುದಲ್ಲ ನಿಜ ಸಹಜಸಮಾಧಿ ಗುಹೇಶ್ವರಾ !