ನಾಲಗೆಯ ಕೊನೆಯಲ್ಲಿ ನಂಜಿನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಾಲಗೆಯ ಕೊನೆಯಲ್ಲಿ ನಂಜಿನ ಸೋನೆ ಸುರಿವನ್ನಕ್ಕರ ಬಾರದುದ ಬಯಸುತ್ತಿಪ್ಪುದು ನೋಡಾ. ನಾಲಗೆಯ ನಂಜನೆ ಕೆಡಿಸಿ
ಅಮೃತವ ಸವಿಯಬಲ್ಲವರಾಗಿ ನಿಮ್ಮ ಶರಣರು ಅನುಪಮಸುಖಿಗಳಯ್ಯ. ನಿಮ್ಮ ಶರಣರೆಲ್ಲರ ಪಾದಕ್ಕೆ ನಮೋ ನಮೋಯೆನುತಿರ್ದೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.