ವಿಷಯಕ್ಕೆ ಹೋಗು

ನಾಳದ ಮರೆಯ ನಾಚಿಕೆ,

ವಿಕಿಸೋರ್ಸ್ದಿಂದ


Title vachana saahitya
Author Akka Mahaadevi
Year 1130-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])

ನಾಳದ ಮರೆಯ ನಾಚಿಕೆ
ನೂಲಮರೆಯಲ್ಲಿ ಅಡಗಿತ್ತೆಂದು ಅಂಜುವರು
ಅಳುಕುವರು. ಮನ ಮೆಚ್ಚಿದಭಿಮಾನಕ್ಕೆ ಆವುದು ಮರೆ ಹೇಳಾ ? ಕಾಯ ಮಣ್ಣೆಂದು ಕಳೆದ ಬಳಿಕ
ದೇಹದಭಿಮಾನ ಅಲ್ಲಿಯೇ ಹೋಯಿತ್ತು. ಪ್ರಾಣ ಬಯಲೆಂದು ಕಳೆದ ಬಳಿಕ
ಮನದ ಲಜ್ಜೆಯಲ್ಲಿಯೆ ಹೋಯಿತ್ತು. ಚೆನ್ನಮಲ್ಲಿಕಾರ್ಜುನನ ಕೂಡಿ ಲಜ್ಜೆಗೆಟ್ಟವಳ ಉಡಿಗೆಯ ಸೆಳೆದುಕೊಂಡಡೆ
ಮುಚ್ಚಿದ ಸೀರೆ ಹೋದರೆ ಅಂಜುವರೆ ಮರುಳೆ ?