ವಿಷಯಕ್ಕೆ ಹೋಗು

ನಾಸಿಕಾಗ್ರದಿಂ ವಾಯುವನು, ಮುಂದೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ನಾಸಿಕಾಗ್ರದಿಂ ಮುಂದೆ ನಾಲ್ಕಂಗುಲಪ್ರಮಾಣದಲ್ಲಿ ನೀಲವರ್ಣಮಾದಾಕಾಶವನು
ಆರಂಗುಲದಲ್ಲಿ ಧೂಮವರ್ಣಮಾದ ವಾಯುವನು
ಎಂಟಂಗುಲದಲ್ಲಿ ರಕ್ತವರ್ಣಮಾದ ಅಗ್ನಿಯನು
ಹತ್ತಂಗುಲದಲ್ಲಿ ತೆರೆಗಳ ವರ್ಣಮಾದ ಅಪ್ಪುವನು
ಹನ್ನೆರಡಂಗುಲದಲ್ಲಿ ಹೊಂಬಣ್ಣಮಾದ ಪೃಥ್ವಿಯನು ಲಕ್ಷಿಪುದೆ ಬಹಿರ್ಲಕ್ಷ್ಯ ನೋಡಾ ಅಖಂಡೇಶ್ವರಾ.