ನಿಜವೆಲ್ಲ ತಾನಾಗಿ, ತಾನೆಲ್ಲ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಿಜವೆಲ್ಲ ತಾನಾಗಿ
ತಾನೆಲ್ಲ ನಿಜವಾಗಿ
ಒಡಲುಪಾಧಿಯೆಂಬುದಿಲ್ಲ ನೋಡಾ
ನಿಂದಡೆ ನೆಳಲಿಲ್ಲ
ನಡೆದಡೆ ಹೆಜ್ಜೆಯಿಲ್ಲ
ಅಪರಿಮಿತ ಘನಮಹಿಮನನೇನೆಂಬೆನಯ್ಯಾ ! ಶಬ್ದವರಿದು ಸಾರಾಯನಲ್ಲ
ಗತಿವಿಡಿದು ಜಡನಲ್ಲ
ಎರಡಳಿದುಳಿದ ನಿಶ್ಚಿಂತನು ! ತನಗೆ ತಾ ನಿಜವಾದ ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುದೇವರೆಂಬ ಜಂಗಮದ ಪಾದಕ್ಕೆ ನಮೋ ನಮೋ ಎನುತಿರ್ದೆನು.