ನಿಜ ಬಲ್ಲವಂಗೆ ಜಲವೂ ಸರಿ ನೆಲವೂ ಸರಿ. ಅರಿದು ನುಡಿವಂಗೆ ಜಗವೂ ಸರಿ ಸಮಯವೂ ಸರಿ. ಎಮಗಾಮಿಥ್ಯವಿಲ್ಲ ಸಂಗನಬಸವಣ್ಣಾ ಗುಹೇಶ್ವರಲಿಂಗವು ಪರಿಪೂರ್ಣವಾದ ಕಾರಣ.