Library-logo-blue-outline.png
View-refresh.svg
Transclusion_Status_Detection_Tool

ನಿತ್ಯನಿರಂಜನನಾದ ಪರಶಿವನು ಲಿಂಗ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ನಿತ್ಯನಿರಂಜನನಾದ ಪರಶಿವನು ಲಿಂಗ ಜಂಗಮ ಭಕ್ತನೆಂದು ಮೂರು ತೆರನಾದನು ನೋಡಿರೇ. ಸದ್ರೂಪು ಲಿಂಗ
ಚಿದ್ರೂಪು ಭಕ್ತ
ಆನಂದ ಸ್ವರೂಪವೇ ಜಂಗಮ ನೋಡಾ. ಆ ಚಿತ್‍ಸ್ವರೂಪವಪ್ಪ ಭಕ್ತಂಗೆ ಸತ್‍ಸ್ವರೂಪವಪ್ಪ ಲಿಂಗವೇ ಅಂಗ; ಆನಂದಸ್ವರೂಪವಪ್ಪ ಜಂಗಮವೇ ಪ್ರಾಣ. ಇದುಕಾರಣ
ಲಿಂಗವೆ ಅಂಗ
ಜಂಗಮವೆ ಪ್ರಾಣಗ್ರಾಹಕನಾದ ಚಿನ್ಮಯನಯ್ಯ ಭಕ್ತನು. ಲಿಂಗ ಜಂಗಮ ಭಕ್ತ ಮೂರುವೊಂದಾಗಿ ಪರಶಿವತತ್ತ್ವದಲ್ಲಡಗಿದ ಅದ್ವೆ ೈತ ಪರಬ್ರಹ್ಮವು ತಾನೇ ಪರಮಭಕ್ತ ನೋಡಾ
ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ.