ನಿತ್ಯ ನಿರ್ಗುಣನು ನಿರ್ವಿಕಾರಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಿತ್ಯ ನಿರ್ಗುಣನು ನಿರ್ವಿಕಾರಿ ನಿರ್ವಿಕಲ್ಪ ನಿತ್ಯಾತ್ಮಕನು `ಏಕಮೇವಾ ನ ದ್ವಿತೀಯ ಪರಾಪರವೆ' ಶರಣ ಲಿಂಗವೆಂದು ತೋರಿತ್ತು ಕಾಣಾ. ಎಂದರೆ
ಆ ಅಂಗ ಲಿಂಗಕ್ಕೆ ಬ್ಥಿನ್ನವೆಲ್ಲಿಯದೋ? ಅದೆಂತೆಂದಡೆ: ಚಿನ್ನ ಬಣ್ಣದಂತೆ
ಶಿವಶಕ್ತಿಯಂತೆ
ಶುದ್ಧ ಪರಾಪರವೆ ಶರಣನು ನೋಡಾ
ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ.