Library-logo-blue-outline.png
View-refresh.svg
Transclusion_Status_Detection_Tool

ನಿಮ್ಮ ಆ ಪೂಜಿಸಿಹೆನೆಂದಡೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ನಿಮ್ಮ ಪೂಜಿಸಿಹೆನೆಂದಡೆ ತನುವಿಲ್ಲವಯ್ಯಾ ಎನಗೆ. ಅದೇನು ಕಾರಣವೆಂದೊಡೆ
ಆ ಪೂಜಿಸುವ ತನು ನೀವೆ ಆದಿರಾಗಿ. ನಿಮ್ಮ ನೆನೆದಿಹೆನೆಂದಡೆ ಮನವಿಲ್ಲವಯ್ಯಾ ಎನಗೆ. ಅದೇನು ಕಾರಣವೆಂದೊಡೆ
ಆ ನೆನೆವ ಮನ ನೀವೆ ಆದಿರಾಗಿ. ನಿಮ್ಮ ಅರಿದಿಹೆನೆಂದಡೆ ಅರುಹುವಿಲ್ಲವಯ್ಯಾ ಎನಗೆ. ಅದೇನು ಕಾರಣವೆಂದೊಡೆ
ಆ ಅರುಹು ನೀವೇ ಆದಿರಾಗಿ. ಅಖಂಡೇಶ್ವರಾ
ನಿಮ್ಮೊಳಗೆ ನಾನು ಉರಿಯುಂಡ ಕರ್ಪುರದಂತಿರ್ದೆನಯ್ಯಾ ದೇವರದೇವಾ.