Library-logo-blue-outline.png
View-refresh.svg
Transclusion_Status_Detection_Tool

ನಿಮ್ಮ ತಲೆದಡಹಿ ತೊತ್ತಿನ

ವಿಕಿಸೋರ್ಸ್ ಇಂದ
Jump to navigation Jump to search



Pages   (key to Page Status)   


ನಿಮ್ಮ ತೊತ್ತಿನ ತೊತ್ತು ಪಡಿದೊತ್ತೆಂದು ಎನ್ನ ಕೈವಿಡಿದು ತಲೆದಡಹಿ ವರದಭಯಹಸ್ತವ ಕೊಟ್ಟು ಮತ್ರ್ಯಲೋಕಕ್ಕೆ ಎನ್ನ ಕಳುಹಿದಿರಾಗಿ
ನೀನೇ ಕರ್ತನು ನಾನೇ ಭೃತ್ಯನು ; ನೀನೇ ಒಡೆಯನು ನಾನೇ ಬಂಟನು ; ನೀನೇ ಆಳ್ದನು ನಾನೇ ಆಳು ; ನೀನೇ ದೇವನು ನಾನೇ ಭಕ್ತನಾಗಿ
ನೀನು ಮಾಡೆಂದ ಮಣಿಹವ ಮಾಡುತಿರ್ಪೆನು ; ನೀನು ಬೇಡೆಂದ ಮಣಿಹವ ಬಿಡುತಿರ್ಪೆನು; ನೀನು ಹೇಳಿದ ತೊತ್ತು ಸೇವೆಯ ಮಾಡುತಿಪ್ಪೆನಯ್ಯ ಅಖಂಡೇಶ್ವರಾ.