ನಿರ್ವಯಲ ಸ್ಥಲದಲ್ಲಿ ಬಿಳಿಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಿರ್ವಯಲ ಸ್ಥಲದಲ್ಲಿ ಬಿಳಿಯ ತಾವರೆ ಶತಸಹಸ್ತ್ರ ದಳದಿಂದ ಪ್ರಭಾವಿಸುತ್ತಿಹುದು ನೋಡಾ. ಅದು ಎಳೆ ಮಿಂಚು ಶತಕೋಟಿಗಳ ಬೆಳಗ ಕೀಳ್ಪಡಿಸುವ ಅಮಲ ಬ್ರಹ್ಮ ನೋಡಾ. ಆ ಬ್ರಹ್ಮದಂಗವ ಬಗಿದುಹೊಕ್ಕು
ದೀಪ ದೀಪವ ಬೆರಸಿದಂತೆ
ಏಕರಸಮಯವಾದ ಅಚ್ಚ ಲಿಂಗೈಕ್ಯನು
ಅಚಲಿತ ನಿರಾಳನು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.