ವಿಷಯಕ್ಕೆ ಹೋಗು

ನಿಶ್ಚಲನೆಂಬ ನಿರ್ದೇಹಿಯ ಮೇಲೆ

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ನಿಶ್ಚಲನೆಂಬ ನಿರ್ದೇಹಿಯ ಮೇಲೆ ಸಚ್ಚಿದಾನಂದವೆಂಬ ಪರವು ಬಂದೆರಗಿಯೆಯ್ದಿ ಎಯ್ದೆ ನುಂಗಿತ್ತು ನೋಡಾ. ಎಯ್ದಿ ನುಂಗಲಾಗಿ ಕಾರ್ಯನೆನಲಿಲ್ಲ; ಕಾರಣವೆನಲಿಲ್ಲ; ಪರಮ ಕಾರಣವೆನಲಿಲ್ಲ; ಜೀವ ಪರಮರೈಕ್ಯನವನೊಳಕೊಂಡು ತೀವಿ ಪರಿಪೂರ್ಣ ಪರಾಪರನೆನಲಿಲ್ಲ. ಲಕ್ಷ ್ಯವೆನಲಿಲ್ಲ; ನಿರ್ಲಕ್ಷ ್ಯವೆನಲಿಲ್ಲ; ಅಲಕ್ಷ ್ಯನ ಅದ್ವಯನ. ಶೂನ್ಯನೆನಲಿಲ್ಲ; ನಿಶ್ಯೂನ್ಯನೆಲಿಲ್ಲ; ಮಹಾಶೂನ್ಯನೆನಲಿಲ್ಲ. ಏನು ಏನೂ ಎನಲಿಲ್ಲ. ನಿರಾಕಾರ ಬಯಲು ನಿಶ್ಯಬ್ದಮಯವಾದ ಕಾರಣ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆಂಬ ನಾಮ ರೂಪು ಕ್ರೀಗಳು ನಷ್ಟವಾದ ಕಾರಣ ಏನೂ ಎನಲಿಲ್ಲ ನೋಡಾ.