ನೀನೊಲಿದಡೆ ಜಗವೆಲ್ಲ ಜಗವೆಲ್ಲ
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ನೀನೊಲಿದಡೆ ಜಗವೆಲ್ಲ ಕೊಂಡಾಡುತಿರ್ಪುದು ನೋಡಾ ; ನೀನೊಲಿಯದಿರ್ದಡೆ ಜಗವೆಲ್ಲ ಹೊತ್ತುಗಲ್ಲ ಹೊತ್ತಿರ್ಪುದು ನೋಡಾ. ನೀನೊಲಿದಡೆ ವೈರಿಗಳೆಲ್ಲ ಸಖರಪ್ಪರು ನೋಡಾ ; ನೀನೊಲಿಯದಿರ್ದಡೆ ಸಖರೆಲ್ಲ ವೈರಿಗಳಾಹರು ನೋಡಾ. ನೀನೊಲಿದಡೆ ಬಾರದ ಪದಾರ್ಥ ಬಪ್ಪುದು ನೋಡಾ; ನೀನೋಲಿಯದಿರ್ದಡೆ ಬರ್ಪುದು ಬಾರದೆ ಹೋಹುದು ನೋಡಾ. ಇದು ಕಾರಣ
ನಿಮ್ಮ ಒಲುಮೆಯಿಂದ ಘನವು ಆವುದು ಇಲ್ಲ ನೋಡಾ ಅಖಂಡೇಶ್ವರಾ.