Library-logo-blue-outline.png
View-refresh.svg
Transclusion_Status_Detection_Tool

ನೀರಲೊಗೆದ ಮರಕ್ಕೆ ಕಾಣಬಾರದ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ನೀರಲೊಗೆದ ಮರಕ್ಕೆ ಕಾಣಬಾರದ ನೆಳಲು ! ಬೀಜವಿಲ್ಲದ ಮರನ ಹೆಸರೇನೆಲವೊ ? ಇದನೇನ ಬಲ್ಲಿರಿ ? ಇದನೇನ ಬಲ್ಲಿರಿ ? ಅರಿವಿನ ಮರೆಯ ಘನಕ್ಕೆ ಘನವಾದುದ ! ಕಾಸಲಿಲ್ಲದ ತುಪ್ಪ
ವಾಸನೆಯಿಲ್ಲದ ಪರಿಮಳ ! ಗುಹೇಶ್ವರನಿಪ್ಪ ನಿರಾಳವ ನೋಡಯ್ಯಾ.