ನೀರಿಲ್ಲದ ವೃಕ್ಷ ಭೂಮಿಯಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನೀರಿಲ್ಲದ ಭೂಮಿಯಲ್ಲಿ ಬೇರಿಲ್ಲದ ವೃಕ್ಷಹುಟ್ಟಿತ್ತ ಕಂಡೆ. ಆ ವೃಕ್ಷ ಎಲೆಯಿಲ್ಲದೆ ಹಣ್ಣು ತಳೆದಿರ್ಪುದ ಕಂಡೆ. ಆ ಹಣ್ಣನು ಒಂದು ಕಾಲಿಲ್ಲದ ಇರುವೆ ಬಂದು ನುಂಗಿತ್ತ ಕಂಡೆ. ಆ ಇರುವೆಯಗರ್ಭದಲ್ಲಿ ಇಬ್ಬರು ಸತ್ತುದ ಕಂಡೆ. ಈ ವಿಚಿತ್ರವ ಹೇಳುವಡೆ ನಾನಿಲ್ಲ
ಕೇಳುವಡೆ ನೀನಿಲ್ಲವಯ್ಯಾ ಅಖಂಡೇಶ್ವರಾ.