ನೀರ ಮೂಡೆಯ ಕಟ್ಟಿ
ಬಯಲಿಗೆ ಬಲೆಯ ಬೀಸಬಹುದೇ ಅಯ್ಯ? ಉರಿಗೆ ಅರಗ ತೋರಿ
ಗಾಳಿಗೆ ಸೊಡರ ಹಿಡಿಯಬಹುದೇ ಅಯ್ಯ? ಮಳಲಗೋಡೆಯನಿಕ್ಕಿ
ಮಂಜ ಮನೆಯ ಮಾಡಿದರೆ ಸ್ಥಿರವಾಗಬಲ್ಲುದೇ ಅಯ್ಯ? ಹಲವು ಮುಖದಲ್ಲಿ ಜಿನುಗುವ ಭವಭಾರಿ ಮನದಲ್ಲಿ ಶಿವನ ನೆನಹ ಕರಿಗೊಳಿಸಬಹುದೇ? ಬಾರದಾರಿಗೂ. ಇದು ಕಾರಣ
ಬಹುಮುಖದ ಮನವ
ಶುದ್ಧ ಸುಜ್ಞಾನ ಸದ್ಭೋಧೆಯಿಂದ ಏಕಮುಖವ ಮಾಡಿ
ಆ ಮನವ ಮಹಾಲಿಂಗ ಪದದಲ್ಲಿ ಸಂಯೋಗವ ಮಾಡಿ
ಮನೋಭ್ರಾಂತಿಯನಳಿದ ನಿಭ್ರಾಂತನ ಮಹೇಶ್ವರನೆಂಬೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.