ನೀರ ಸುಟ್ಟ ಕಿಚ್ಚಿನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನೀರ ಸುಟ್ಟ ಕಿಚ್ಚಿನ ಬೂದಿಯ ಮರ್ಮವ ಬಲ್ಲಡೆ
ನೀವು ಹೇಳಿರೆ? ಬಯಲ ಸುಟ್ಟ ಕಿಚ್ಚಿನ ಬೂದಿಯ ಕಂಡಡೆ
ನೀವು ಹೇಳಿರೆ? ವಾಯುನಿಂದ ಸ್ಥಾನಕ್ಕೆ (ವ?)
ಗುಹೇಶ್ವರ ನಿಂದ ನಿಲವ ಕಂಡಡೆ
ನೀವು ಹೇಳಿರೆ?