ವಿಷಯಕ್ಕೆ ಹೋಗು

ನೀ ಹುಟ್ಟಿದೆಯಯ್ಯ ಗುರುವಿನ

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ನೀ ಹುಟ್ಟಿದೆಯಯ್ಯ ಗುರುವಿನ ಮನಸ್ಥಲದಲ್ಲಿ. ನಾ ಹುಟ್ಟಿದೆನಯ್ಯ ಗುರುವಿನ ಕರಸ್ಥಲದಲ್ಲಿ. ಇದು ಕಾರಣ: ನನ್ನ ಅಂಗವ ಮಾಡಿ
ನಿನ್ನ ಪ್ರಾಣವ ಮಾಡಿ ಪ್ರಾಣಲಿಂಗಪ್ರತಿಷೆ*ಯ ಮಾಡಿದನಯ್ಯ ಶ್ರೀಗುರು. ಆ ಗುರುವಿನ ಪ್ರಸನ್ನ ಪ್ರಸಾದದಿಂದ
ನಾನು ನೀನು ಹುಟ್ಟಿದೆವಾಗಿ
ಎನಗೂ ನಿನಗೂ ಗುರುಪ್ರಸಾದವೇ ಪ್ರಾಣ ನೋಡ. ಇದುಕಾರಣ: ಗುರುಪ್ರಸಾದವ
ಎಲೆ ಲಿಂಗವೆ ನೀನು ಕೊಳಲೇಬೇಕು. ಗುರುಪ್ರಸಾದವ
ಕೊಳದಿದ್ದರೆ ನೀ ಲಿಂಗವಲ್ಲ ನೋಡಾ. ಪ್ರಸಾದವಿಲ್ಲದ ಲಿಂಗಕ್ಕೆ ದೇವತ್ವವೆಲ್ಲಿಯದೊ? ದೇವತ್ವವಿಲ್ಲದುದು ಪೂಜೆಗೆ ಸಲುವುದೇ? ಪೂಜೆಗೆ ಸಲ್ಲದೆಂದೆನು ಕಾಣಾ ಎಲೆ ಶಿವನೆ ನೀ ಸಾಕ್ಷಿಯಾಗಿ. ಇದು ಕಾರಣ: ಗುರುಪ್ರಸಾದವ ನಾನು ಕೊಳ್ಳಲೇಬೇಕು. ಆ ಗುರುಪ್ರಸಾದವ ಕೊಳ್ಳದಿದ್ದರೆ ನಾನು ಪ್ರಸಾದಿಯಲ್ಲ ನೋಡಾ. ಇದುಕಾರಣ: ನಾನೂ ನೀನೂ ಗುರುಪ್ರಸಾದಿಗಳು ಕಾಣಾ. ಕೇಳು: ಗುರಮಂತ್ರೋಪದೇಶದಿಂದ ಹುಟ್ಟಿದ ಲಿಂಗಕ್ಕೆ ಗುರುಪ್ರಸಾದವ ಕೊಡಬಾರದು ಎಂಬ ಅನಾಚಾರಿಗಳಿಗೆ ನಾಯಕನರಕ ತಪ್ಪದು ನೋಡಾ. `ಏವಂ ಭೇದ ಕಲಾದೇವಿ ಸದ್ಗುರುಶ್ಯಿಷ್ಯ ಮಸ್ತಕೇ