ವಿಷಯಕ್ಕೆ ಹೋಗು

ನುಡಿಯಬೇಕು ಅನುಭಾವವ. ಸತ್ಯಸದಾಚಾರವುಳ್ಳವರೊಡನೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ನುಡಿಯಬೇಕು
ಸತ್ಯಸದಾಚಾರವುಳ್ಳವರೊಡನೆ
ಅನುಭಾವವ.
ನುಡಿಯಬೇಕು
ಭಕ್ತಿಯುಕ್ತಿ
ಮುಕ್ತಿಯುಳ್ಳವರೊಡನೆ
ಅನುಭಾವವ.
ನುಡಿಯಬೇಕು
ಸಾಧು
ಸಜ್ಜನ
ಸದ್‍ಭಕ್ತ
ಶರಣರೊಡನೆ
ಅನುಭಾವವ.
ನುಡಿಯಬೇಕು
ನಮ್ಮ
ಅಖಂಡೇಶ್ವರಲಿಂಗವ
ಕೂಡಬೇಕೆಂಬ
ಬಯಕೆಯುಳ್ಳವರೊಡನೆ
ಶಿವಾನುಭಾವವ.