ನುಡಿಯಲಾಗದು ನುಡಿಯಲಾಗದು ನುಡಿಯಲಾಗದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನುಡಿಯಲಾಗದು ನುಡಿಯಲಾಗದು ನಯನುಡಿಯಿಲ್ಲದವರೊಡನೆ. ನುಡಿಯಲಾಗದು ನುಡಿಯಲಾಗದು ದಯಗುಣವಿಲ್ಲದವರೊಡನೆ. ನುಡಿಯಲಾಗದು ನುಡಿಯಲಾಗದು ಭಯಭಕ್ತಿಯಿಲ್ಲದವರೊಡನೆ. ನುಡಿಯಲಾಗದು ನುಡಿಯಲಾಗದು ಸ್ವಯಜ್ಞಾನವಿಲ್ಲದವರೊಡನೆ ಶಿವಾನುಭಾವವ ! ಅದೇನು ಕಾರಣವೆಂದೊಡೆ : ತನ್ನ ಅರುಹಿಂಗೆ ಹಾನಿ
ಮಹಾ ಪರಿಣಾಮ ಕೆಡುವುದು. ಇದು ಕಾರಣ ಕಡುಪಾತಕ ಜಡಜೀವಿಗಳೊಡನೆ ಲಕ್ಷಕ್ಕೊಮ್ಮೆ ಕೋಟಿಗೊಂದುವೇಳೆಯಾದಡೂ ನುಡಿಯಲಾಗದಯ್ಯ ಅಖಂಡೇಶ್ವರಾ.