ನೂಲೆಳೆಯ ತೋರದ ಪಶುವಿಂಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನೂಲೆಳೆಯ ತೋರದ ಪಶುವಿಂಗೆ ಮೇರುವೆಯ ತೋರ ಕೆಚ್ಚಲು ನೋಡ ಅಯ್ಯ. ಅದಕ್ಕೆ ಕೋಡೆರಡಿಲ್ಲ ನೋಡಾ. ಅದು ಮೊಲೆಗೊಕ್ಕುಳಹಾಲ ಕರೆವುದು. ಕರೆವಾತಗೆ ಕೈಯಲ್ಲ; ಕುಡಿವಾತಗೆ ಬಾಯಿಲ್ಲ ನೋಡಾ. ಕೈಯಿಲ್ಲದೆ ಕರೆದು ಬಾಯಿಲ್ಲದೆ ಉಂಡು ತೃಪ್ತಿಯಿಲ್ಲದೆ ಪರಿಣಾಮಿಸಬಲ್ಲಾತನಲ್ಲದೆ ಶಿವಶರಣನಲ್ಲ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.