ನೆನಹು ಸತ್ತಿತ್ತು ಭ್ರಾಂತು
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ನೆನಹು
ಸತ್ತಿತ್ತು
ಭ್ರಾಂತು
ಬೆಂದಿತ್ತು.
ಅರಿವು
ಮರೆಯಿತ್ತು
ಕುರುಹುಗೆಟ್ಟಿತ್ತು.
ಗತಿಯನರಸಲುಂಟೆ?
ಮತಿಯನರಸಲುಂಟೆ?
ಅಂಗವೆಲ್ಲ
ನಷ್ಟವಾಗಿ
ಲಿಂಗಲೀಯವಾಯಿತ್ತು.
ಕಂಗಳಂಗದ
ಕಳೆಯ
ಬೆಳಗಿನ
ಭಂಗ
ಹಿಂಗಿತ್ತು
ಗುಹೇಶ್ವರಾ.