ವಿಷಯಕ್ಕೆ ಹೋಗು

ನೆಲನೊಂದೆ ಜಲನೊಂದೆ ಎಂಬುದ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ನೆಲನೊಂದೆ ಜಲನೊಂದೆ ಎಂಬುದ ಎಲ್ಲ ಲೋಕವು ಬಲ್ಲುದು ನೋಡಿರೆ ! ನೆಲ ಶುದ್ಧವೆಂಬಿರಿ:ನೆಲದೊಳಗಿಪ್ಪ ಎಂಬತ್ತುನಾಲ್ಕುಲಕ್ಷ ಜೀವರಾಸಿಗಳು ಅಲ್ಲಿಯೆ ಹುಟ್ಟಿ ಅಲ್ಲಿ ಮಡಿವವಾಗಿ ಆ ನೆಲ ಶುದ್ಧವಲ್ಲ ನಿಲ್ಲು. ಜಲ ಶುದ್ಧವೆಂಬಿರಿ:ಜಲದೊಳಗಿಪ್ಪ ಇಪ್ಪತ್ತೊಂದು [ಲಕ್ಷ] ಜೀವರಾಸಿಗಳು ಅಲ್ಲಿಯೆ ಹುಟ್ಟಿ ಅಲ್ಲಿಯೆ ಮಡಿವವಾಗಿ ಆ ಜಲ ಶುದ್ಧವಲ್ಲ ನಿಲ್ಲು. ನಿಮ್ಮ ತನು ಶುದ್ಧವೆಂಬಿರಿ; ತನುವಿನೊಳಗಿಪ್ಪ ಅಷ್ಟಮದಗಳೆಂಬ ಭವಿಗಳಂ ಕಟ್ಟಿ ನಿಲಿಸಲರಿಯಲಿಲ್ಲವಾಗಿ ಆ ತನು ಶುದ್ಧವಲ್ಲ ನಿಲ್ಲು. ನಿಮ್ಮ ಹಸ್ತಂಗಳು ಶುದ್ಧವೆಂಬಿರಿ:ಒಂದು ಹಸ್ತ ಜಿಹ್ವೆಯೊಳಗಾಡುವದು ಒಂದು ಹಸ್ತ ಗುಹ್ಯದೊಳಗಾಡುವುದು_[ಆ] ಹಸ್ತಂಗಳು ಶುದ್ಧವಲ್ಲ ನಿಲ್ಲು. ನಿಮ್ಮ ನಯನಂಗಳು ಶುದ್ಧವೆಂಬಿರಿ:ನಯನದಲ್ಲಿ ನೋಡಿದಲ್ಲಿ ಕೂಡುವಿರಾಗಿ ನಿಮ್ಮ ನಯನಂಗಳು ಶುದ್ಧವಲ್ಲ ನಿಲ್ಲು_ ಇಂತೀ ತಮ್ಮ ಅಶುದ್ಧವಂ ತಾವು ಕಳೆಯಲರಿಯದೆ
ಇದಿರ ಅಶುದ್ಧವಂ ಕಳೆವೆವೆಂದಡೆ
ನಾಚಿತ್ತು ನೋಡಾ ಎನ್ನ ಮನವು. ಭಕ್ತಿ ವಿಶ್ವಾಸದಿಂದ ಗುರುಲಿಂಗಜಂಗಮದ ಪಾದಾರ್ಚನೆಯಂ ಮಾಡಿ ಪಾದೋದಕ ಪ್ರಸಾದವಂ ಕೊಂಬ ಭಕ್ತನ ಶೀಲವೇ ಶೀಲವಲ್ಲದೆ ಉಳಿದವರದಲ್ಲ ಕಾಣಾ ಕೂಡಲಚೆನ್ನಸಂಗಮದೇವಾ