ನೆಲೆಗಾಂಬನ್ನಕ್ಕರ ತೊರೆಯ ಅಂಜಿಕೆಯೈಸೆ

ವಿಕಿಸೋರ್ಸ್ದಿಂದ



Pages   (key to Page Status)   


ನೆಲೆಗಾಂಬನ್ನಕ್ಕರ ತೊರೆಯ ಅಂಜಿಕೆಯೈಸೆ ? ನೆಲೆಗಂಡ ಬಳಿಕ ತೊರೆ ಬರುದೊರೆಯಲ್ಲದೆ ಅಂಜಿಕೆಯಿಲ್ಲ. ಮನವುಳ್ಳನ್ನಬರ ಕರ್ಮದ ಕೋಟಲೆಯೈಸೆ ? ಮನವಳಿದ ಬಳಿಕ ಕರ್ಮ ನಿಃಕರ್ಮವಲ್ಲದೆ ಬೇಕು ಬೇಡೆಂಬ ಸಂದೇಹವುಂಟೆ
ಗುಹೇಶ್ವರಾ ನಿಮ್ಮ ನಿಜವನರಿದ ಶರಣಂಗೆ ?