ನೇಮಸ್ತನಿಂದ ಮಹಾಪಾಪಿ ಲೇಸು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನೇಮಸ್ತನಿಂದ ಮಹಾಪಾಪಿ ಲೇಸು
ಅವನಿಂದ ಭೂಮಿಯ ಮೇಲೆ ಹುಟ್ಟಿದ ಸಮಸ್ತಪ್ರಾಣಿಯ ಕೊಲುವ ವ್ಯಾಧ ಲೇಸು. ಅವನಿಂದ ಅನಂತಕೋಟಿ ನರಕವನೈದುವರು
ಆ ನೇಮಸ್ತನೆಂಬ ಮಹಾಪಾಪಿಯ ಮುಖವ ನೋಡಿ ಅವನ ಒಡಗೂಡಿಕೊಂಡು ನಡೆದವರು; ಅದೆಂತೆಂದಡೆ: ನೇಮಸ್ತಯೋ ಮಹಾಪಾಪೀ ತೇನ ದರ್ಶಂತೇ [ಪಶ್ಯತಿರಿ]ಯೋನರಃ ¨sõ್ಞಕ್ತಿಕಂ ತತ್ವಪರ್ಯಂತಂ ನರಕಂ ಯಾತಿ ಸ ಧ್ರುವಂ ಇಂತೆಂದುದಾಗಿ_ಇದು ಕಾರಣ ಕೂಡಲಚೆನ್ನಸಂಗಯ್ಯಾ ನೇಮಸ್ತರಾದ ಪಾಪಿಗಳನೆನಗೆ ತೋರದಿರಯ್ಯಾ.