ನೇಹದ ಸುಖವ ನೋಟ ನುಂಗಿತ್ತು ನೋಟದ ಸುಖವ ಕೂಟ ನುಂಗಿತ್ತು ಕೂಟದ ಸುಖವ ಆಲಿಂಗನ ನುಂಗಿತ್ತು ಆಲಿಂಗದ ಸುಖವ ಸಂಗ ನುಂಗಿತ್ತು ಸಂಗದ ಸುಖವ ಪರವಶ ನುಂಗಿತ್ತು ಪರವಶದ ಸುಖವ ಕೂಡಲಸಂಗಯ್ಯ ತಾನೆ ಬಲ್ಲ.