ನೋಟವೆ ಕೂಟ, ಕೂಟವೆ

ವಿಕಿಸೋರ್ಸ್ದಿಂದ



Pages   (key to Page Status)   


ನೋಟವೆ ಕೂಟ
ಕೂಟವೆ ಪ್ರಾಣ
ಪ್ರಾಣವೆ ಏಕ
ಏಕವೆ ಸಮರಸ
ಸಮರಸವೆ ಲಿಂಗ
ಲಿಂಗವೆ ಪರಿಪೂರ್ಣ
ಪರಿಪೂರ್ಣವೆ ಪರಬ್ರಹ್ಮ
ಪರಬ್ರಹ್ಮವೆ ತಾನು !_ ಇಂತೀ ನಿಜವ ಗುಹೇಶ್ವರ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳು ಎತ್ತ ಬಲ್ಲರು ನೋಡಯ್ಯಾ.