ನೋಡಲಿಲ್ಲದ ಶೃಂಗಾರ, ಮಾತಾಡಲಿಲ್ಲದ

ವಿಕಿಸೋರ್ಸ್ದಿಂದ



Pages   (key to Page Status)   


ನೋಡಲಿಲ್ಲದ ಶೃಂಗಾರ
ಮಾತಾಡಲಿಲ್ಲದ ಶಬ್ದ ಬೇಡಲಿಲ್ಲದ ವರ_ನೋಡಿರೆ ನಿರಾಳವ ! ಬಾಡಲಿಲ್ಲದ ಸಸಿಯ ಬೆಳಸು ಕೂಡದೆ ಕೂಡಿತ್ತೊಂದು ಸುಖವ ಕಂಡೆ ನಾನು. ಇಲ್ಲದ ಉಪಕಾರ ಮೆಲ್ಲದ ಸವಿಯಿಂದ ಸುಖಿಯಾದೆ ಗುಹೇಶ್ವರಾ.