ವಿಷಯಕ್ಕೆ ಹೋಗು

ನೋಡಿಹೆನೆಂದರೆ ನೋಟ ಸಮರಸವಾಯಿತ್ತು.

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ನೋಡಿಹೆನೆಂದರೆ ನೋಟ ಸಮರಸವಾಯಿತ್ತು. ಕೂಡಿಹೆನೆಂದರೆ ಕೂಟ ನಿಬ್ಬೆರಗಾಯಿತ್ತಯ್ಯ. ನೋಟ ಕೂಟಗಳೆಂಬುಭಯವಳಿದು
ನಿಜದಲ್ಲಿ ನಿರ್ವಯಲಾಯಿತ್ತಯ್ಯ. ನೋಡಲಿಲ್ಲದ ನುಡಿಸಲಿಲ್ಲದ ಕೂಡಿಲಿಲ್ಲದಪ್ರತಿಮ ತಾನು ತಾನಾದ ಪರಮಾನಂದ ಸುಖದಲ್ಲಿ ಓಲಾಡುತ್ತಿರ್ದೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.