ನೋಡಿ ನೋಟವ ಮರೆದು,

ವಿಕಿಸೋರ್ಸ್ದಿಂದ



Pages   (key to Page Status)   


ನೋಡಿ ನೋಟವ ಮರೆದು
ಕೂಡಿ ಕೂಟವ ಮರೆದು
ಬಯಲ ಸಮರಸಕ್ಕೆ ಮರುಳಾಯಿತ್ತಲ್ಲಾ
ಜೀವಪ್ರಾಣನ ಭೇದವಳಿದು ನಿಜವದಕ್ಕಾಯಿತ್ತಲ್ಲಾ. ಅನ್ಯಚಿಹ್ನವಳಿದು ತನ್ನತಾ ಮರೆಯಿತ್ತು
ಕೂಡಲಚೆನ್ನಸಂಗಾ ನೀನೆಂದೆ ನಿಂದಿತಲ್ಲಾ.