ನೋಡುವುದೊಂದು ನೋಡಿಸಿಕೊಂಬುದೊಂದು ಇನ್ನೂ

ವಿಕಿಸೋರ್ಸ್ದಿಂದ



Pages   (key to Page Status)   


ನೋಡುವುದೊಂದು ನೋಡಿಸಿಕೊಂಬುದೊಂದು ಇನ್ನೂ ನಿನ್ನಲ್ಲಿ ಎರಡುಂಟಲ್ಲಾ ! ಕರಸ್ಥಲದಲ್ಲಿ ಒಂದು
ಮನಸ್ಥಲದಲ್ಲಿ ಒಂದು
ಇನ್ನೂ ನಿನ್ನಲ್ಲಿ ಎರಡುಂಟಲ್ಲಾ ಕೂಡಲಚೆನ್ನಸಂಗಯ್ಯನಲ್ಲಿ ಗುಹೇಶ್ವರನೆಂಬ ಲಿಂಗವು ನಿನಗೆಂತು ಸಾಧ್ಯವಾಯಿತ್ತು ಹೇಳಾ ಪ್ರಭುವೆ ?