ನೋಡುವ ಸೂರ್ಯ ಸುರಿವ ಜಲ ಹೊಲೆನೆಲೆ ಶುದ್ಧ ಎಲ್ಲಕ್ಕೂ ಸರಿ. ಅರಿದು ನುಡಿವವಂಗೆ ಮರೆದು ನುಡಿದು ತಲ್ಲಣಿಸುವವಂಗೆ ಅವನ ಹೃದಯವೆ ಸಾಕ್ಷಿ ! ಗುಹೇಶ್ವರಲಿಂಗಕ್ಕೆ ತಥ್ಯ ಮಿಥ್ಯವಿಲ್ಲ ಸಂಗನಬಸವಣ್ಣಾ.