ವಿಷಯಕ್ಕೆ ಹೋಗು

ನೋಡೂದ ನೋಡಲರಿಯದೆ, ಕೆಟ್ಟಿತ್ತೀ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ನೋಡೂದ ನೋಡಲರಿಯದೆ
ಕೆಟ್ಟಿತ್ತೀ ಲೋಕವೆಲ್ಲ. ನೋಡೂದ ನೋಡಬಲ್ಲಡೆ ಕೂಡಲಿಲ್ಲ ಅಗಲಲಿಲ್ಲ. ನೋಟದ ಕೂಟದ ಅಗಲದ ಸುಖವನು ಗುಹೇಶ್ವರಾ ನಿಮ್ಮ ಶರಣ ಬಲ್ಲ