ವಿಷಯಕ್ಕೆ ಹೋಗು

ನೋಳ್ಪುದೆ ನೋಟದೊಳ್, ನೋಟವೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ನೋಳ್ಪುದೆ ನೋಟದೊಳ್
ನೋಟವೆ ನೋಟಕನೊಳ್
ನೋಟಕನೆ ಸಾಕ್ಷಿ
ಸಾಕ್ಷಿಯೆ ಲಿಂಗ. ಲಿಂಗದಿಂದೆಲ್ಲವು
ಆ ಲಿಂಗಕ್ಕೆ ಕುರುಪಿಲ್ಲ. ಲಿಂಗಕ್ಕೆ ಲಿಂಗವೇ
ಲಿಂಗವಿದು ಬಹು ಗುಹ್ಯ
ಗುರುಲಿಂಗದೆರಕದಿಂ ಸಚ್ಛಿಷ್ಯನೆ ಬಲ್ಲ. ಭವಿಗಳದನೆತ್ತ ಬಲ್ಲರು ? ಕಣ್ಣುಗೆಟ್ಟವರು ನೋಡಾ ಗುಹೇಶ್ವರಾ