ಪಂಚಭೂತಂಗಳುತ್ಪತ್ತಿ ಇಲ್ಲದಂದು, ಅಂಡಜವಳಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಪಂಚಭೂತಂಗಳುತ್ಪತ್ತಿ ಇಲ್ಲದಂದು
ಅಂಡಜವಳಯ ರಚಿಸದಂದು
ಚತುರ್ದಶಭುವನಂಗಳಿಲ್ಲದಂದು
ಪಂಚಾಶತಕೋಟಿ ವಿಸ್ತೀರ್ಣದ ಅನಂತಕೋಟಿ ಬ್ರಹ್ಮಾಂಡಾದಿ ಲೋಕಾದಿಲೋಕಂಗಳೇನುಯೇನೂಯಿಲ್ಲದಂದು
ನಾನು ನೀನೆಂಬ ವಾಕು ಹುಟ್ಟದಂದು
ಅನಿರ್ವಾಚ್ಯ ಮಹಾಶೂನ್ಯನಾಗಿರ್ದೆಯಲ್ಲಾ ನೀನು
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.